ವಾಸ್ಕೋ ಡ ಗಾಮ: ಪ್ರಶ್ನೋತ್ತರ ಟಿಪ್ಪಣಿ
ವಾಸ್ಕೋ ಡ ಗಾಮ ಯಾರು?
ಸಮುದ್ರದ ಹಾದಿಯಲ್ಲಿ ಭಾರತ ತಲುಪುವ ಮಾರ್ಗ ಕಂಡುಹಿಡಿದ ಪೋರ್ಚುಗೀಸ್ ನಾವಿಕ.
ಅವನ ಹಡಗಿನ ಹೆಸರೇನು?
ಸಾವೋ ಗೇಬ್ರಿಯಲ್. ಭಾರತಕ್ಕೆ ನೌಕಾಮಾರ್ಗ ಕಂಡುಹಿಡಿಯುವಲ್ಲಿ ಇನ್ನೂ ಕೆಲವು ಹಡಗುಗಳ ನೆರವನ್ನು ಅವನು ಪಡೆದುಕೊಂಡ.
ಹಡಗುಗಳು ಭಾರತದತ್ತ ಯಾನ ಆರಂಭಿಸಿದ್ದು ಎಂದು?
ಜುಲೈ 8, 1497, ಶನಿವಾರ.
ಭಾರತದ ಯಾವ ಜಾಗವನ್ನು ವಾಸ್ಕೋ ಡ ಗಾಮ ತಲುಪಿದ?
ಕಲ್ಲಿಕೋಟೆಯ ಕೋಯಿಕ್ಕೋಡ್ ಅವನು ಮೊದಲು ಕಾಲಿಟ್ಟ ಜಾಗ. ಮೇ 22, 1498ರಂದು ಅವನು ಕೋಯಿಕ್ಕೋಡ್ ತಲುಪಿದ. ಪೂರ್ವ ಆಫ್ರಿಕಾದ ಪೈಲಟ್ ಒಬ್ಬರು ಭಾರತದ ಪಶ್ಚಿಮ ಕರಾವಳಿಯ ದಾರಿಯನ್ನು ಅವನಿಗೆ ತೋರಿಸಿದರು.
ಎರಡನೇ ಬಾರಿ, ಅಂದರೆ 1500ರಲ್ಲಿ ಮತ್ತೆ ವಾಸ್ಕೋ ಡ ಗಾಮ ಭಾರತಕ್ಕೆ ಬಂದದ್ದು ಏಕೆ?
ಮೊದಲ ಸಲ ಅವನು ಭಾರತಕ್ಕೆ ಬಂದಾಗ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಹಾಗಾಗಿ ತರಾತುರಿಯಲ್ಲಿ ಅವನು ಇಲ್ಲಿಂದ ಹೊರಟುಬಿಟ್ಟ. ತನ್ನ ಉದ್ದೇಶ ಸರಿಯಾದದ್ದು ಎಂಬುದನ್ನು ಮನದಟ್ಟು ಮಾಡಿಸುವ ಸಲುವಾಗಿ ಅವನು 1500ರಲ್ಲಿ ಸಾಕಷ್ಟು ಸಹ ನೌಕಾಯಾನಿಗಳೊಟ್ಟಿಗೆ ಬಂದಿಳಿದ.

No comments:
Post a Comment