Powered By Blogger

Tuesday, June 1, 2010

ಸರಿಯೋ ತಪ್ಪೊ



ಮಾಲ್ಟಾ ಮಿಲಿಟರಿ ಗಣರಾಜ್ಯ ವಿಶ್ವದಲ್ಲೇ ಅತಿ ಚಿಕ್ಕ ಪ್ರಜಾಪ್ರಭುತ್ವ ಆಡಳಿತ ಹೊಂದಿದೆ.
ಸರಿ. ಸೇಂಟ್‌ ಜಾನ್‌ಆಫ್‌ ರೋಡ್ಸ್‌ ಹಾಗೂ ಮಾಲ್ಟಾದ ಮಿಲಿಟರಿ ಗಣರಾಜ್ಯ ಎಂಬುದು ಈ ಪ್ರದೇಶದ ಪೂರ್ಣ ಹೆಸರು. ಇಟಲಿಯ ರೋಮ್‌ನಲ್ಲಿ ಇದರ ಎರಡು ಪ್ರಧಾನ ಕಚೇರಿಗಳಿವೆ. ಪ್ರಧಾನಿಗೆ ಸಮಾನವಾದ ಹುದ್ದೆಗೆ ಇಲ್ಲಿ ‘ಗ್ರ್ಯಾಂಡ್‌ ಮಾಸ್ಟರ್‌’ ಎಂದು ಹೆಸರು. ಜೀವಿತಾವಧಿಗೆ ವ್ಯಕ್ತಿಯೊಬ್ಬ ಈ ಹುದ್ದೆಗೆ ಆಯ್ಕೆಯಾಗುವುದು ವಿಶೇಷ. 102 ದೇಶಗಳ ಜೊತೆ ದ್ವಿಪಕ್ಷೀಯ ಸಂಬಂಧ ಹೊಂದಿರುವ ಮಾಲ್ಟಾ, ತನ್ನದೇ ಪಾಸ್‌ಪೋರ್ಟ್‌ ಹಾಗೂ ಸ್ಟಾಂಪ್‌ಗಳನ್ನೂ ವಿತರಿಸುತ್ತದೆ.

ಉದಯಿಸುವ ಸೂರ್ಯನ ಮೊದಲ ಕಿರಣಗಳನ್ನು ಪಡೆಯುವ ಭಾರತದ ರಾಜ್ಯ ಅಸ್ಸಾಂ.
ತಪ್ಪು. ಸೂರ್ಯ ಉದಯವಾದಾಗ ಮೊದಲ ಕಿರಣ ತಾಕುವ ಭಾರತದ ರಾಜ್ಯ ಅರುಣಾಚಲ ಪ್ರದೇಶ. ‘ಬೆಳಗು ಸವರಿದ ಬೆಟ್ಟಗಳ ರಾಜ್ಯ’ ಎಂದೇ ಇದು ಹೆಸರುವಾಸಿಯಾಗಿದೆ. ವಿಶ್ವದಲ್ಲೇ ಸೂರ್ಯನ ಮೊದಲ ಕಿರಣಗಳು ಸೋಕುವ ಪ್ರದೇಶವೆಂದರೆ ಡೋಂಗ್‌ ಕಣಿವೆ.

No comments:

Post a Comment