Powered By Blogger

Sunday, February 21, 2010

‘ಯೂ ಟ್ಯೂಬ್‌’ಗೆ 5ರ ಸಂಭ್ರಮ



ಗೂಗಲ್‌ ಬಳಗದ ‘ಯೂ ಟ್ಯೂಬ್‌’ಗೆ ಮೊನ್ನೆ ಮೊನ್ನೆಯಷ್ಟೇ ಐದು ವರ್ಷ ತುಂಬಿತು. ಫೆ.14, 2005ರಲ್ಲಿ ಪಾ್ರರಂಭವಾದ ‘ಯೂಟ್ಯೂಬ್‌’ ಯಶಸ್ಸಿನ ತುದಿ ಮುಟ್ಟಿದ್ದು ಎಷ್ಟು ನಿಜವೋ ವಿವಾದಗಳ ಸರಮಾಲೆಯನ್ನೇ ಪೋಣಿಸಿ ಕೊಂಡಿದ್ದು ಅಷ್ಟೇ ನಿಜ.
‘ವಿಡಿಯೋ ಕಾ್ಯಮರಾ ಮತ್ತು ಇಂಟರ್ನೆಟ್‌ ಸಂಪರ್ಕ ಇರುವ ಯಾರೇ ಆದರೂ ತಮ್ಮ ಕಥೆಯನ್ನು ಇಡೀ ಜಗತ್ತಿಗೆ ಹೇಳಿಕೊಳ್ಳುವ ತಾಣವೊಂದನ್ನು ರೂಪಿಸುವ ಆಶಯದಲ್ಲಿ ನಾವು ಯೂಟ್ಯೂಬ್‌ ಪಾ್ರರಂಭಿಸಿದೆವು’ ಎಂದು ಯೂ ಟ್ಯೂಬ್‌ನ ಸಹ ಸಾ್ಥಪಕ ಮತ್ತು ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಾಡ್‌ ಹರ್ಲೆ ಹೇಳುತಾ್ತರೆ.
ಯೂ ಟ್ಯೂಬ್‌ ಪಾ್ರರಂಭವಾದ ದಿನಗಳಲ್ಲಿ ವಿಡಿಯೋಗಳನ್ನು ಇಂಟರ್ನೆಟ್‌ಗೆ ಅಪ್‌ಲೋಡ್‌ ಮಾಡುವುದೇ ಸವಾಲಿನ ಸಂಗತಿಯಾಗಿತ್ತು. ಹಣಕಾಸಿನ ಪರಿಸ್ಥಿತಿಯೂ ಅಷ್ಟು ಉತ್ತಮವಾಗಿರಲಿಲ್ಲ. ನವೆಂಬರ್ 2005 ರಲ್ಲಿ ‘ಸಿಕ್ಯೂ ಕಾ್ಯಪಿಟಲ್‌’ನ ಆರ್ಥಿಕ ಸಹಾಯದಿಂದ ಪುಷ್ಟಿಗೊಂಡ ಯೂ ಟ್ಯೂಬ್‌ ಡಿಸೆಂಬರ್ 2005ರಲ್ಲಿ ಅಧಿಕೃತವಾಗಿ ಇಂಟರ್ನೆಟ್‌ನಲ್ಲಿ ಹರಿ ದಾಡಲು ಪಾ್ರರಂಭಿಸಿತು.
ಸಾರ್ವಜನಿಕರು ತಮಗೆ ಇಷ್ಟಬಂದ ವಿಡಿಯೊ ಕ್ಲಿಪ್‌ಗಳನ್ನು ಅಪ್‌ಲೋಡ್‌ ಮಾಡಲು ಅವಕಾಶ ನೀಡುವ ಯೂ ಟ್ಯೂಬ್‌ಗೆ ನಂತರದ ದಿನಗಳಲ್ಲಿ ಕಾಪಿರೈಟ್‌ ಭೂತ ಕಾಡತೊಡಗಿತು. ದುಬಾರಿ ಬಾ್ಯಂಡ್‌ವಿಡ್‌‌ತ ದರಗಳಲ್ಲಿ ಹೈರಾಣಾಗಿದ್ದ ಯೂ ಟ್ಯೂಬ್‌ನ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿರದ ಕಾರಣ ‘ನಮ್ಮ ಕಾಪಿರೈಟ್‌ ಇರುವ ವಿಡಿಯೊಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಬಿಡಿ’ ಎಂದು ಸಿನಿಮಾ ಸಂಸ್ಥೆಗಳು ಕೋರಿ ಸುಮ್ಮನಾಗುತ್ತಿದ್ದವು. ಕೇಸ್‌ಗಳನ್ನು ಹಾಕಿದರೂ ಪರಿಹಾರ ಕೊಡುವಷ್ಟು ಹಣ ಅಂದು ಯೂ ಟ್ಯೂಬ್‌ ಬಳಿ ಇರಲಿಲ್ಲ.
ಯೂ ಟ್ಯೂಬ್‌ ಇತಿಹಾಸದಲ್ಲಿ ನವೆಂಬರ್ 2006 ಮಹತ್ವದ ದಿನ. ಇಂಟರ್ನೆಟ್‌ ದೈತ್ಯ ಗೂಗಲ್‌ ಯೂ ಟ್ಯೂಬ್‌ ಸಂಸ್ಥೆಯನ್ನು 1.65 ದಶಲಕ್ಷ ಡಾಲರ್ಗೆ ಖರೀದಿಸಿತು. ಇಂಟರ್ನೆಟ್‌ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು ಚರ್ಚೆಗೊಳಗಾದ ವಿಷಯ. ಅತ್ಯುತ್ತಮ ಆರ್ಥಿಕ ಹಿನ್ನೆಲೆ ಹೊಂದಿದ್ದ ಗೂಗಲ್‌ ಮೇಲೆ ಕಾಪಿರೈಟ್‌ ಕೇಸ್‌ ಜಡಿದರೆ ಅದು ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುವಂತಿರಲಿಲ್ಲ. ಒಂದಾದ ಮೇಲೊಂದರಂತೆ ಯೂ ಟ್ಯೂಬ್‌ ಮೇಲೆ ಕಾಪಿರೈಟ್‌ ಕೇಸ್‌ಗಳು ಬಿದ್ದವು. ವಯಕಾಮ್‌ ಸಂಸ್ಥೆ ಬರೋಬ್ಬರಿ 10 ಲಕ್ಷ ಡಾಲರ್ ಪರಿಹಾರ ಕೋರಿ ಪ್ರಕರಣ ದಾಖಲಿಸಿತು. ವಯಕಾಮ್‌ ಕಾಪಿರೈಟ್‌ ಹೊಂದಿರುವ 1 ಲಕ್ಷ ವಿಡಿಯೊ ಕ್ಲಿಪ್‌ಗಳನ್ನು ಯೂ ಟ್ಯೂಬ್‌ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. ಇದನ್ನು 15 ಲಕ್ಷ ಮಂದಿ ನೋಡಿದಾ್ದರೆ ಎಂಬುದು ವಯಾಕಾಮ್‌ ವಾದ. ಈ ಜಗಳ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಹಕ್ಕುಸಾ್ವಮ್ಯ (ಕಾಪಿರೈಟ್‌) ಉಲ್ಲಂಘನೆ ಪ್ರಕರಣಗಳಿಂದ ರೋಸಿ ಹೋದ ಯೂ ಟ್ಯೂಬ್‌ 2008ರಿಂದೀಚೆಗೆ ಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು ಟೆಲಿವಿಷನ್‌ ಸಂಸ್ಥೆಗಳ ಒಪ್ಪಂದ ಮಾಡಿಕೊಂಡು ಪೂರ್ಣ ಪ್ರಮಾಣದ ಸಿನಿಮಾ ಮತ್ತು ಟಿವಿ ಶೋಗಳನ್ನು ಪ್ರಸಾರ ಮಾಡುತ್ತಿದೆ. ನಿಮ್ಮದಲ್ಲದ, ನಿಮ್ಮ ಸಾ್ವಮಿತ್ವ ಹೊಂದಿರದ ಕ್ಲಿಪ್‌ಗಳನ್ನು ಅಪ್‌ಲೋಡ್‌ ಮಾಡಬೇಡಿ ಎಂದು ಸಾರ್ವಜನಿಕರನ್ನು ವಿನಂತಿಸುತ್ತಿದೆ.
ಅಸಭ್ಯ ವಿಡಿಯೊ: ಸಾರ್ವಜನಿಕರಿಗೆ ಮುಕ್ತವಾಗಿ ವಿಡಿಯೊ ಕ್ಲಿಪ್‌ಗಳನ್ನು ಅಪ್‌ಲೋಡ್‌ ಮಾಡುವ ಅವಕಾಶ ನೀಡಿರುವುದರಿಂದ ದ್ವೇಷದ ವೇದಿಕೆಯಾಗಿಯೂ ಯೂ ಟ್ಯೂಬ್‌ ಬಳಕೆಯಾಗುತ್ತಿದೆ. ಹಲವು ಅಸಭ್ಯ, ಅಶ್ಲೀಲ ವಿಡಿಯೊ ಕ್ಲಿಪ್‌ಗಳು ಇಂದಿಗೂ ಯೂ ಟ್ಯೂಬ್‌ನಲ್ಲಿ ಕಾಣಸಿಗುತ್ತವೆ. ಟಿವಿ ಶೋಗಳು ಮತ್ತು ಚಿತ್ರಗಳ ಕ್ಲಿಪ್‌ಗಳನ್ನೂ ಕೆಲವರು ಅಪ್‌ಲೋಡ್‌ ಮಾಡುವುದು ಮುಂದುವರಿದಿದೆ.
‘ಸರಿಯಲ್ಲ’ ಎಂದೆನಿಸಿದ ವಿಡಿಯೊ ಕ್ಲಿಪ್‌ಗಳನ್ನು ‘ಫಾ್ಲಗ್‌’ ಮಾಡುವ ಅವಕಾಶವನ್ನು ಯೂ ಟ್ಯೂಬ್‌ ಇದೀಗ ಒದಗಿಸಿದೆ. ಇತ್ತೀಚೆಗೆ ‘ಸೇ್ಟ ಮೋಡ್‌’ ಸೌಲಭ್ಯ ಒದಗಿಸಿರುವ ‘ಯೂ ಟ್ಯೂಬ್‌’ ಬೇಡವೆನಿಸಿದ ವಿಡಿಯೊಗಳನ್ನು ಅಡಗಿಸಿ ಇಡುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಆದರೆ ದಿನಕ್ಕೆ ಲಕ್ಷಗಟ್ಟಲೆ ವಿಡಿಯೊ ಗಳು ಅಪ್‌ಲೋಡ್‌ ಆಗುವ ಸಂದರ್ಭದಲ್ಲಿ ಒಂದಷ್ಟು ಕಸ ಬಂದೇ ಬರುತ್ತದೆ ತಾನೆ?
ಸರ್ವವಾ್ಯಪಿ: ಇಂಟರ್ನೆಟ್‌ನಲ್ಲಿ ವಿಡಿಯೊ ಕಾ್ರಂತಿಗೆ ಯೂ ಟ್ಯೂಬ್‌ ಮುನ್ನುಡಿ ಬರೆದಿದೆ. ಅಮೆರಿಕದಲ್ಲಿರುವ ಮೊಮ್ಮಗಳ ಆಟ ನೋಡಬೇಕೆನ್ನುವ ಭಾರತದ ಅಜ್ಜನಿಗೆ, ತನ್ನ ಮಗ ಹೈದರಾಬಾದ್‌ನ ಉಸಾ್ಮನಿಯಾ ವಿವಿಯಲ್ಲಿ ಮಾಡಿದ ಭಾಷಣದ ಠೀವಿ ಆನಂದಿಸಬೇಕೆನ್ನುವ ಹಳ್ಳಿಯೂರಿನ ರಾಮಮೂರ್ತಿಗೆ, ಬಾಳೆಹೊನ್ನೂರಿನಲ್ಲಿ ರಂಭಾಪುರಿ ಸಾ್ವಮಿಗಳು ಮಾಡುವ ಸಂಸಾ್ಥನದ ಪೂಜೆಯನ್ನು ನೋಡಬೇಕೆನ್ನುವ ಕನಾ್ಯಕುಮಾರಿಯಲ್ಲಿರುವ ವೀರಶೈವ ಭಕ್ತನಿಗೆ ಯೂ ಟ್ಯೂಬ್‌ ಅಂದಿಗೂ- ಇಂದಿಗೂ ನೆರವಾಗುತ್ತಿದೆ.
ಜುಲೈ 2006ರ ಹೊತ್ತಿಗೆ ಯೂ ಟ್ಯೂಬ್‌ನಲ್ಲಿ 65,000 ವಿಡಿಯೊ ಕ್ಲಿಪ್‌ಗಳಿದ್ದವು. ಪ್ರತಿದಿನ ಒಂದು ಕೋಟಿ ಜನ ಯೂ ಟ್ಯೂಬ್‌ಗೆ ಭೇಟಿ ನೀಡುತ್ತಿದ್ದರು. ಇಂದು ಒಂದು ದಿನಕ್ಕೆ ಲಕ್ಷಗಟ್ಟಲೆ ವಿಡಿಯೊ ಕ್ಲಿಪ್‌ಗಳು ಯೂ ಟ್ಯೂಬ್‌ಗೆ ಅಪ್‌ಲೋಡ್‌ ಆಗುತ್ತವೆ. ಒಂದು ಅಂದಾಜಿನ ಪ್ರಕಾರ ಒಂದು ನಿಮಿಷಕ್ಕೆ ಸುಮಾರು 20 ಗಂಟೆ ಅವಧಿಯ ವಿಡಿಯೊ ಕ್ಲಿಪ್‌ಗಳು ಯೂ ಟ್ಯೂಬ್‌ನೊಳಗೆ ಅಡಗಿಕೊಳ್ಳುತ್ತಿವೆ. ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಅಗಣಿತ.
ಚುನಾವಣೆಯ ಭಾಷಣಗಳು, ಕಳೆದು ಹೋದ ಮಕ್ಕಳ ವಿವರ, ಸಂಗೀತ ಕಚೇರಿ, ನಾಟಕ ಎಲ್ಲಕ್ಕೂ ಇಂದು ಯೂಟ್ಯೂಬ್‌ ಬಳಕೆಯಾಗುತ್ತಿದೆ. ಯೂ ಟ್ಯೂಬ್‌ ಬರುವವರೆಗೆ ಜಗತ್ತಿನ ಯಾವುದೇ ವೆಬ್‌ಸೈಟ್‌ ತನ್ನ ವೀಕ್ಷಕರಿಗೆ ವಿಡಿಯೋಗಳ ಉಚಿತ ಅಪ್‌ಲೋಡ್‌ಗೆ ಅವಕಾಶ ಕಲ್ಪಿಸಿಕೊಟ್ಟಿರಲಿಲ್ಲ. ಆದರೆ ಇಂದು ಅದೊಂದು ಸಾಮಾಜಿಕ ವಿದ್ಯಮಾನವೇ ಆಗಿಹೋಗಿದೆ. ಐದು ವರ್ಷದಲ್ಲಿ ಯೂ ಟ್ಯೂಬ್‌ ಇಷ್ಟೆಲಾ್ಲ ಮಾಡಿದೆ. ಇದು ಆಶ್ಚರ್ಯ ಆದರೂ ಸತ್ಯ.
ಞ ಡಿ.ಎಂ.ಘನಶಾ್ಯಮ

No comments:

Post a Comment