Powered By Blogger

Sunday, February 21, 2010

ಅಂತರ್ಜಾಲ ಭದ್ರತೆ ವಿಶ್ವದ ಹಿತ ಕಾಯುವವರಾ್ಯರು?



ಕೆಲವು ದಿನಗಳಿಂದ ಚೀನಾ ಮತ್ತು ಗೂಗಲ್‌ ನಡುವೆ ನಡೆಯುತ್ತಿರುವ ಸೈಬರ್ ಸಮರವನ್ನು ನೀವು ಗಮನಿಸಿರಬಹುದು. ತೈವಾನ್‌ನಿಂದ ಆರು ಭಿನ್ನ ಐಪಿ ವಿಳಾಸಗಳಲ್ಲಿ ‘ಟ್ರೀಜನ್‌’ ವೈರಸ್‌ ಇರುವ ಪಿಡಿಎಫ್‌ ಕಡತವನ್ನು ಇಮೇಲ್‌ಗಳಿಗೆ ರವಾನಿಸುವ ಮೂಲಕ ಚೀನಾ ಗೂಗಲ್‌ ಮೇಲೆ ಇಂಥದೊಂದು ವ್ಯವಸ್ಥಿತ ಸೈಬರ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಚೀನಾದ ಕೆಲವು ಕಂಪ್ಯೂಟರ್ ತಯಾರಿಕಾ ಕಂಪನಿಗಳು ಮತ್ತು ವೆಬ್‌ ಆತಿಥೇಯ ಕಂಪನಿಗಳ ಕೈವಾಡವೂ ಇರುವುದು ಈಗ ಬಯಲಾಗುತ್ತಿದೆ.
ಗೂಗಲ್‌ ತನ್ನ ಅಧಿಕೃತ ಬಾ್ಲಗ್‌ನಲ್ಲಿಯೇ ಈ ವಿಷಯ ಬಹಿರಂಗಪಡಿಸಿದ್ದು, ಗೂಗಲ್‌ನ ಭೌದ್ಧಿಕ ಆಸ್ತಿಯನ್ನು ಕೊಳ್ಳೆ ಹೊಡೆದ ಜೊತೆಯಲ್ಲಿಯೇ ಚೀನಾ, ವಿಶ್ವದ 20ಕ್ಕೂ ಹೆಚ್ಚು ಪ್ರಮುಖ ವಾಣಿಜ್ಯ ಕಂಪನಿಗಳ ಮೇಲೂ ಸೈಬರ್ ದಾಳಿ ನಡೆಸಿರುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಎನ್ನುತ್ತಿದೆ. ಆದರೆ ಚೀನಾದ ವಾದವೇ ಬೇರೆ. ‘ನಾವು ಮಾನವ ಹಕ್ಕುಗಳ ಹೋರಾ ಟಗಾರರ ಬಗ್ಗೆ ತಿಳಿದು ಕೊಳ್ಳಲು, ಅವರ ಜಿಮೇಲ್‌ ಖಾತೆಗಳನ್ನು ಹಾ್ಯಕ್‌ ಮಾಡಿದೇ್ದವೆಯೇ ಹೊರತು, ಗೂಗಲ್‌ ವೆುೀಲಾಗಲಿ, ಅಮೆರಿಕದ ಮೇಲಾಗಲಿ ಯಾವುದೇ ಸೈಬರ್ ದಾಳಿ ನಡೆಸಿಲ್ಲ ಎಂದು ಹೇಳುತ್ತಿದೆ. ಆದರೆ ಚೀನಾ ದಾಳಿ ನಡೆಸಿರುವ ಜಿಮೇಲ್‌ ಬಳಕೆದಾರರಲ್ಲಿ ಹೆಚ್ಚಿನವರು ಅಮೆರಿಕ, ಮತ್ತು ಯುರೋಪ್‌ನವರೇ ಆಗಿದಾ್ದರೆ. ಹೀಗಾಗಿ ಈ ದಾಳಿಯ ಉದೇ್ದಶವೇ ಬೇರೆ ಎನ್ನುತ್ತಿದೆ ಗೂಗಲ್‌.
ಚೀನಾ ನಡೆಸುತ್ತಿರುವ ಸೈಬರ್ ದಾಳಿಗಳು ಇಂದು ನಿನ್ನೆಯದಲ್ಲ. ಚೀನಾದ ‘ಘೋಸ್‌‌ಟ ನೆಟ್‌’ ( ಎನ್ನುವ ಹಾ್ಯಕರ್ ಪಡೆ ಅಮೆರಿಕದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಒಂದು ವರ್ಷದ ಹಿಂದಷ್ಟೇ ದಾಳಿ ನಡೆಸಿತ್ತು. ಇತ್ತೀಚೆಗೆ ಮತೊ್ತಂದು ದಾಳಿ ನಡೆದಿದೆ. ಬಿಗಿ ಭದ್ರತೆ ಇರುವ ಶ್ವೇತಭವನ, ಪೆಂಟಗನ್‌ ಕಟ್ಟಡ, ಎಫ್‌ಬಿಐ ಸೇರಿದಂತೆ ಅಲ್ಲಿನ ಪ್ರಮುಖ 33 ಸರ್ಕಾರಿ ಕಚೇರಿಗಳಲ್ಲಿನ ಕಂಪ್ಯೂಟರ್ಗಳಲ್ಲಿದ್ದ ವಿದ್ಯುನಾ್ಮನ ಮಾಹಿತಿಯನ್ನು ಚೀನಾದ ಹಾ್ಯಕರ್ಗಳು ಅಪಹರಿಸಿ, ಅಮೆರಿಕದ ಸಂಪೂರ್ಣ ಅಂರ್ತಜಾಲ ವ್ಯವಸ್ಥೆಯೇ ಸ್ಥಂಭಿಸುವಂತೆ ಮಾಡಿದಾ್ದರೆ.
ಈಗ ನಿಜಕ್ಕೂ ಚೀನಾದ ಸೈಬರ್ ದಾಳಿಯನ್ನು ತಡೆಯುವುದು ಅಮೆರಿಕ ಮತ್ತು ಗೂಗಲ್‌ಗೆ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಹೀಗಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಏಜನ್ಸಿ ( ಮತ್ತು ಗೂಗಲ್‌ ಜಂಟಿಯಾಗಿ ಈಗ ಚೀನಾದ ದಾಳಿಯನ್ನು ತಡೆಯಲು ಸಿದ್ಧತೆ ನಡೆಸುತ್ತಿದೆ. ಒಂದೆಡೆ ಗೂಗಲ್‌ ತನ್ನ ಜಿಮೇಲ್‌ ಬಳಕೆದಾರರಿಗೆ ಹೊಸ ಸುರಕ್ಷತಾ ವಿಧಾನಗಳನ್ನು ಪರಿಚಯಿಸುತ್ತಿದೆ. ಬೌ್ರಸರ್ ಮೂಲಕ ನುಸುಳುವ ವೈರಸ್‌ಗಳನ್ನು ತಡೆಯಲು ಹೊಸ ಭದ್ರತಾ ವ್ಯವಸ್ಥೆಯನ್ನು ಅಳವಡಿಸುವುದಾಗಿ ಹೇಳಿದೆ. ಕಳೆದ 9 ವರ್ಷಗಳಿಂದ ಚೀನಾದಲ್ಲಿ ನೆಲೆಯೂರಲು ಗೂಗಲ್‌ ಪ್ರಯತ್ನಿಸುತ್ತಿದ್ದರೂ, ಚೀನಾ ಅದಕ್ಕೆ ಅವಕಾಶ ನೀಡುತ್ತಿಲ್ಲ. ಸೆನಾ್ಸರ್ ಶಿಪ್‌ ವಿಷಯಕ್ಕೆ ಚೀನಾ ಮತ್ತು ಗೂಗಲ್‌ ನಡುವೆ ಕದನವೇ ನಡೆದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರಿರುವ ಚೀನಾದಲ್ಲಿ ಆಧಿಪತ್ಯ ಸಾ್ಥಪಿಸುವುದರ ಜೊತೆಗೆ, ಸೈಬರ್ ದಾಳಿ ತಡೆಯುವುದು ಅಮೆರಿಕದಷ್ಟೇ, ಗೂಗಲ್‌ಗೂ ಪ್ರಮುಖ ವಿಷಯವಾಗಿದೆ.
ಗೂಗಲ್‌, ಚೀನಾ, ಅಮೆರಿಕವನ್ನು ಬಿಡೋಣ. ಭಾರತದ ಮೇಲೂ ಚೀನಾ ಸೈಬರ್ ದಾಳಿ ನಡೆಸಿದೆ. ಇತ್ತೀಚೆಗೆ ತಮ್ಮ ಕಚೇರಿಯ ಕಂಪ್ಯೂಟರ್ಗಳಲ್ಲಿನ ಮಾಹಿತಿ ಯನ್ನು ಕದಿಯಲು ಚೀನಾ ಯತ್ನಿ ಸು ತ್ತಿದೆ ಎಂದು ಭಾರತದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ. ಕೆ. ನಾರಾಯ ಣನ್‌ ಅವರೇ ಖುದಾ್ದಗಿ ಆರೋಪಿ ಸಿದ್ದರು. ಭಾರತದಲ್ಲಿರುವ ಹತ್ತು ವರ್ಷದ ಹಳೆಯ ಮಾಹಿತಿ ತಂತ್ರಜ್ಞಾನ ಕಾಯಿದೆ ()ಯಿಂದ ಚೀನಾದ ಮೇಲೆ ಯಾವ ಕ್ರಮ ಕೈಗೊಳ್ಳಲು ಸಾಧ್ಯ?
ಇಡಿ ವಿಶ್ವವೇ ಗೂಗಲ್‌ ಸರ್ವರ್ನಲ್ಲಿದೆ ಎಂದು ನಂಬಿಕೊಂಡಿರುವ ಕಾಲವಿದು. ಉಣ್ಣುವ ಅನ್ನವನ್ನೂ, ಉಸಿರಾಡುವ ಗಾಳಿಯನ್ನೂ ಹೊರತು ಪಡಿಸಿ, ಉಳಿದೆಲ್ಲ ಮಾಹಿತಿಯನ್ನು ಅಂತರ್ಜಾಲ ಮತ್ತು ಕಂಪ್ಯೂಟರ್ನಲ್ಲಿ ಸಂಗ್ರಹಿಸಿಕೊಂಡಿರುವ ಡಿಜಿಟಲ್‌ ವಿಶ್ವವಿದು. ರಾಷ್ಟ್ರವೊಂದರ ಗಣಕ ವ್ಯವಸ್ಥೆಯ ಮೇಲೆ ಇಂಥದೊಂದು ಸೈಬರ್ ದಾಳಿ ನಡೆದರೆ ಅದರ ಪರಿಣಾಮ ಊಹಿಸಿಕೊಳ್ಳಿ. ಇಡೀ ದೇಶದ ಮೂಲ ಸೌಕರ್ಯ ವ್ಯವಸ್ಥೆಯೇ ಬುಡಮೇಲಾಗಿ ಹೋಗುತ್ತದೆ. ಗೂಗಲ್‌, ಚೀನಾ ಮತ್ತು ಅಮೆರಿಕದ ಸೈಬರ್ ಸಮರದಲ್ಲಿ ಅಂತರ್ಜಾಲದ ಭವಿಷ್ಯ ಏನಾಗಲಿದೆ ಎನ್ನುವುದು ಮತೊ್ತಮದು ಗಂಭೀರ ಪ್ರಶ್ನೆ?
ಹಾಗೆ ನೋಡಿದರೆ, ಮೊದಲ ಬಾರಿಗೆ ಸೈಬರ್ ಸಮರವನ್ನು ಆರಂಭಿಸಿದ್ದೆೀ ಅಮೆರಿಕ. ಈಗ ಅದೇ ಅದಕ್ಕೆ ಮುಳುವಾಗಿದೆ. ಇದು ಭಯೋತಾ್ಪದಕ ದಾಳಿಗಿಂತ ಅಪಾಯಕಾರಿ. ಅಮೆರಿಕ ತನ್ನ ಅಂತರ್ಜಾಲ ಭದ್ರತೆಯ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದೆಯೆಂದರೆ, ತನ್ನ ದೇಶದ ಎಲ್ಲ ಡಿಜಿಟಲ್‌ ವ್ಯವಸ್ಥೆಗಳನ್ನು ಅಮೂಲ್ಯ ಆಸ್ತಿಗಳಾಗಿ ಪರಿಗಣಿಸಿ, ಅವುಗಳನ್ನು ಅತ್ಯಂತ ಜೋಪಾನವಾಗಿ ನೋಡಿಕೊಳ್ಳಲು ತಜ್ಞರ ಪಡೆಯನ್ನು ರೂಪಿಸಿದೆ. ದಿನಕ್ಕೆ ಸುಮಾರು ನೂರರಷ್ಟು ವಿದೇಶಿ ಬೇಹುಗಾರಿಕಾ ಸಂಸ್ಥೆಗಳು ಅಮೆರಿಕದ ಕಂಪ್ಯೂಟರ್ ವ್ಯವಸ್ಥೆಯನ್ನು ಮುರಿದು ಮಾಹಿತಿ ಗಳನ್ನು ಕೊಳ್ಳೆ ಹೊಡೆಯಲು ಪ್ರಯತ್ನಿ ಸುತ್ತಿದೆ. ಈ ಹಿನ್ನಲೆಯಲ್ಲಿ ಶ್ವೇತಭವನ ದಲೊ್ಲಂದು ಅಂತರ್ಜಾಲ ಭದ್ರತಾ ಕಚೇರಿ ಪಾ್ರರಂಭಿಸಿದೆ. ಸ್ವತಃ ಒಬಾಮ ಕೂಡ ವಯಕ್ತಿಕವಾಗಿ ಒಬ್ಬ ಸೈಬರ್ ಭದ್ರತಾ ಗಾರನನ್ನು ನೇಮಿಸಿ ಕೊಂಡಿದಾ್ದರೆ.
ಇತ್ತೀಚೆಗಷ್ಟೇ ‘ಫೈನಾನ್ಷಿಯಲ್‌ ಟೈಮ್‌‌ಸನ ಪ್ರಸಿದ್ಧ ಅಂಕಣಕಾರ, ಗಿಡೊನ್‌ ರಾಚ್‌ಮನ್‌ ತಮ್ಮ ಅಂಕಣವೊಂದರಲ್ಲಿ ಸೈಬರ್ ದಾಳಿಯ ಕುರಿತು ಪ್ರಸಾ್ತಪಿಸುತಾ್ತ, ಆಧುನಿಕ ಜಗತ್ತಿನ ಬಹುದೊಡ್ಡ ಸಮಸ್ಯೆ ‘ಅಂತರ್ಜಾಲ ಭದ್ರತೆಗೆ ಸಂಬಂಧಿಸಿದ್ದು ಎಂದು ಹೇಳಿದಾ್ದರೆ. ಅಮೆರಿಕದಲ್ಲಿ ನ ಮುಖ್ಯಸ್ಥ ಜಾನ್‌ ಚಾಪ್‌ಮನ್‌ ನೇತೃತ್ವದಲ್ಲಿ ಸೈಬರ್ ದಾಳಿ ಹಾಗೂ ಅಂತರ್ಜಾಲ ಭದ್ರತೆಯ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದು ರಚನೆಗೊಂಡಿದೆ. ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಸೈಬರ್ ದಾಳಿ ತಡೆಯಲು ‘ವೆಬ್‌ ಲ್ಟರ್’ ಅಳವಡಿಕೆ ಮೊರೆ ಹೋಗಿದೆ. ಬ್ರಿಟಿಷ್‌ ಕೌನ್ಸಿಲ್‌ ಮತೊ್ತಂದು ಭರವಸೆಯ ಹೆಜ್ಜೆ ಇರಿಸಿದೆ. ಸೈಬರ್ ದಾಳಿ ತಡೆಯಲು, ಅಂತರ್ಜಾಲದ ಮೂಲಕ ಜಾಗತಿಕ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ.
ಈಗ ಅಂತರ್ಜಾಲದ ಅತಿ ಮುಖ್ಯ ಘಟ್ಟದಲ್ಲಿದೇ್ದವೆ. ಇಂದು ಜಗತ್ತಿನಾದ್ಯಂತ ಕೋಟಾ್ಯನು ಕೋಟಿ ಜಾಲತಾಣಗಳಿವೆ. ಎಲ್ಲ ರಾಷ್ಟ್ರಗಳ ಮಾಹಿತಿಗಳು ಆನ್‌ಲೈನ್‌ನಲ್ಲಿದೆ. ದೇಶವೊಂದರ ಮೇಲೆ ಮತೊ್ತಂದು ರಾಷ್ಟ್ರ ಸೈಬರ್ ದಾಳಿ ನಡೆಸಿದರೆ ಏನಾಗಬಹುದು? ಇದನ್ನು ತಡೆಯುವುದು ಹೇಗೆ? ಈ ದಾಳಿಕೋರರನ್ನು ಪತ್ತೆ ಹಚ್ಚುವುದು ಹೇಗೆ? ಈ ಕುರಿತು ಅಂತಾರಾಷ್ಟ್ರೀಯ ಸೈಬರ್ ಕಾನೂನು ಏನು ಹೇಳುತ್ತದೆ. ಇತಾ್ಯದಿ ವಿವರಗಳೆಲ್ಲ ಮತೊ್ತಮ್ಮ ಪರಿಷ್ಕೃತಗೊಳ್ಳಬೇಕಿರುವ ಕಾಲ ಹತ್ತಿರ ಬಂದಿದೆ.

ಞ ಜೋಮನ್‌ ವರ್ಗೀಸ್‌

No comments:

Post a Comment