




ಕರ್ನಾಟಕ ಕತ್ತಲೆಯಲ್ಲಿದೆ. ಕರೆಂಟ್ ದಿನನಿತ್ಯ ಕೈ ಕೊಡುತ್ತಿದೆ. ಜಲ- ಉಷ್ಣ ವಿದ್ಯುತ್ ಉತಾ್ಪದನೆಯ ಹೊಸ ಯೋಜನೆಗಳಿಗೆ ನೂರೆಂಟು ತಾಪತ್ರಯ. ಗಾಳಿಯಂತ್ರಗಳ ಮೂಲಕ ವಿದ್ಯುತ್ ಪಡೆಯುವುದು ಸುಲಭ. ಆದರೆ ಅಲ್ಲೂ ತಾಪತ್ರಗಳಿವೆ. ಈ ಹಿನ್ನೆಲೆಯಲೇ್ಲ ಇದೀಗ ಬಂದಿದೆ- ಮಾರ್ಸ್ ತಂತ್ರಜ್ಞಾನ!
ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡಿ ಬರುವುದು ಚಿತ್ರದುರ್ಗದ ಕಲ್ಲಿನಕೋಟೆ, ಒನಕೆ ಓಬವ್ವ, ವಿಷ್ಣುವರ್ಧನರ ಮೊದಲ ಚಿತ್ರ ನಾಗರಹಾವು- ಮೊದಲಾದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡಿದವರಿಗೆ ಚಿತ್ರದುರ್ಗದ ಬೆಟ್ಟಗಳ ಮೇಲೆ ಸಾ್ಥಪಿಸಿರುವ ಬೃಹತ್ ಗಾಳಿಯಂತ್ರಗಳು ಕಲ್ಲಿನ ಕೋಟೆ ಗೋಚರಿಸುವ ಮೊದಲೇ ತಮ್ಮ ದರ್ಶನ ನೀಡುತ್ತವೆ.
ಏನೀ ಗಾಳಿಯಂತ್ರಗಳು? ನಾಗರಿಕತೆ ಬೆಳೆಯುತ್ತಿದ್ದಂತೆ ವಿದ್ಯುತ್ತಿಗೂ ಬೇಡಿಕೆ ಹೆಚ್ಚುತ್ತಿದೆ. ಅಣೆಕಟ್ಟುಗಳ ಮುಖಾಂತರ ಹರಿಯುವ ನದಿಗೆ ತಡೆಯೊಡ್ಡಿ ವಿದ್ಯುತ್ ಉತಾ್ಪದಿಸುವ ಮಾರ್ಗ ಬಹುತೇಕ ದುಬಾರಿಯೂ, ಕಷ್ಟಕರವೂ ಆಗಿದೆ. ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕಿ ಸಾ್ವವಲಂಬಿಯಾಗುವುದು ಇಂದಿನ ಅಗತ್ಯ ವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕದ ಹಲವೆಡೆ ಗಾಳಿಯಂತ್ರಗಳನ್ನು ಸಾ್ಥಪಿಸಿ ವಿದ್ಯುತ್ ಉತಾ್ಪದನೆಗೆ ಪ್ರೀತಾ್ಸಹ ನೀಡಲಾಗಿದೆ. ಸೋಲಾರ್ ವಿದ್ಯುತ್ ದೀಪಗಳಿಗೂ ಮನ್ನಣೆ ದೊರಕುತ್ತಿದೆ.
ಗಾಳಿಯಂತ್ರಗಳೇಕೆ ಸರ್ವವಾ್ಯಪಿಯಾಗಿಲ್ಲ? ಒಂದು ವೇಳೆ ವಿದ್ಯುತ್ ಕೊರತೆಗೆ ಗಾಳಿಯಂತ್ರಗಳು ಸಮರ್ಪಕ ಉತ್ತರ ವಾದರೆ ಪ್ರತಿ ಊರಿನಲೇ್ಲಕೆ ಇವನ್ನು ಸಾ್ಥಪಿಸಲಾಗುತ್ತಿಲ್ಲ?
ಇದಕ್ಕೆ ಕಾರಣ ಹಲವಾರು. ಗಾಳಿಯಂತ್ರಕ್ಕೆ ಅವಶ್ಯವಾಗಿರುವ ವಾತಾವರಣ ಎಲಾ್ಲ ಪ್ರದೇಶಗಳಲ್ಲಿ ಸಿಗಲು ಸಾಧ್ಯ ವಿಲ್ಲ. ಉದಾಹರಣೆಗೆ ಗಾಳಿಯಂತ್ರದ ಸಾ್ಥಪನೆಗೆ ದಿನದ ಎಲಾ್ಲ ಅವಧಿಗಳಲ್ಲೂ ಸೆಕೆಂಡಿಗೆ ಕನಿಷ್ಟ 5 ಮೀಟರ್ ವೇಗದ ಗಾಳಿ ಬೀಸುತ್ತಿರುವ ಎತ್ತರದ ಜಾಗ ಬೇಕಾಗುತ್ತದೆ. ಈ ಕಾರಣಾ್ಕಗಿಯೇ ಚಿತ್ರದುರ್ಗದ ಬೆಟ್ಟಗಳ ಮೇಲೆ ಹಲವು ಗಾಳಿಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಆದರೆ ಅತಿ ಎತ್ತರದ ಬೆಟ್ಟದ ಮೇಲೂ ಸಹ ಗಾಳಿಯ ವೇಗ ದಿನದ ಕೆಲವು ಘಂಟೆಗಳ ಕಾಲ 5 ಮೀಟರ್ಗಿಂತಲೂ ಕಡಿಮೆ ಇರುತ್ತವೆ. ಆಗ ಆ ಯಂತ್ರಗಳ ಬ್ಲೇಡುಗಳು ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ಕಾರಣದಿಂದ ಬೆಟ್ಟದ ಮೇಲೆ ಹಲವಾರು ಗಾಳಿಯಂತ್ರಗಳನ್ನು ಸಾ್ಥಪಿಸುವುದು ಅನಿವಾರ್ಯವಾಗಿದೆ. ಗಾಳಿಯಂತ್ರದ ಬೆಲೆ ಬಲು ದುಬಾರಿ. ಸಾ್ಥಪನಾ ವೆಚ್ಚವೂ ಹೆಚ್ಚು. ನಿರ್ವಹಣೆಗಾಗಿ ಎತ್ತರದ ಕ್ರೇನುಗಳನ್ನು ಆ ಗಾಳಿಯಂತ್ರದ ಬಳಿಗೆ ಸಾಗಿಸುವ ಸಾಗಣಿಕಾ ವೆಚ್ಚವೇ ಕೆಲವೊಮ್ಮೆ ನಿರ್ವಹಣಾ ವೆಚ್ಚಕ್ಕೂ ಅಧಿಕವಾಗುವುದುಂಟು. ಎತ್ತರದ ಸ್ಥಳಗಳಲ್ಲಿ ಮಾತ್ರ ಸಾ್ಥಪಿಸ ಬಹುದಾದ್ದರಿಂದ ಎಲಾ್ಲ ಊರುಗಳಿಗೆ ಈ ಯಂತ್ರಗಳ ಸೌಭಾಗ್ಯವಿಲ್ಲ.
ಹಾಗಾದರೆ ಬೇರೆ ಪರ್ಯಾಯ ಮಾರ್ಗಗಳೇ ಇಲ್ಲವೇ?
-ಇದೆ. ಕೆನಡಾದ ಮ್ಯಾಗೆನ್‌ಸ ಪವರ್ ಸಂಸ್ಥೆ ಯಾವುದೇ ಸ್ಥಳದಲ್ಲಿ ಸಾ್ಥಪಿಸಬಹುದಾದ ಸರಳ ಗಾಳಿಯಂತ್ರದ ಕರಡು ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ‘ಮಾರ್ಸ್’ (ಮ್ಯಾಗೆನ್ ಏರ್ ರೋಟರ್ ಸಿಸ್ಟಮ್- ಎಂಎಆರ್ಎಸ್) ಎಂಬ ಹೆಸರಿನ ಈ ತಂತ್ರಜ್ಞಾನವನ್ನು ಸುಲಭವಾಗಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಸಾ್ಥಪಿಸಬಹುದು ಎಂದು ಸಂಸ್ಥೆ ಪ್ರಕಟಿಸಿದೆ. ಈ ಉಪಕರಣದ ಕಾರ್ಯವೈಖರಿ ಹೇಗೆ ಎಂದು ತಿಳಿಯುವ ಮೊದಲು ಕೆಲವು ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಗಾಳಿಪಟ
ಗಾಳಿಪಟವನ್ನು ನಾವೆಲ್ಲರೂ ಹಾರಿಸಿಯೇ ಇದೇ್ದವೆ. ಕಡಿಮೆ ಎತ್ತರದಲ್ಲಿದಾ್ದಗ ಗೋತಾ ಹೊಡೆಯುವ, ಕೆಳಕ್ಕಿಳಿಯುವ ಗಾಳಿಪಟ ಕೊಂಚ ಎತ್ತರ ಪಡೆದ ಬಳಿಕ ಸ್ಥಿರ ವಾಗಿ ರುವುದೇಕೆ? ಇದಕ್ಕೆ ಕಾರಣ- ಎತ್ತರ ಹೆಚ್ಚಿದಂತೆ ಗಾಳಿಯ ವೇಗ ಹೆಚ್ಚು ಸ್ಥಿರವಾಗಿರುವುದೂ ಹಾಗೂ ಹೆಚ್ಚಿನದಾ್ದಗಿರುವುದೇ ಆಗಿದೆ. ಅದೂ ಅಲ್ಲದೇ ಒಂದು ಹಂತದಲ್ಲಿ ಗಾಳಿಪಟದ ದಾರವನ್ನು ಒಂದೆಡೆ ಕಟ್ಟಿಬಿಟ್ಟರೆ ಇಡಿಯ ದಿನ ಅದು ತನ್ನಷ್ಟಕ್ಕೆ ಹಾರಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ- ಮ್ಯಾಗ್ನಸ್ ಎಫೆಕ್‌ಟ.
ಸುಮ್ಮನೇ ಎಸೆದ ಕ್ರಿಕೆಟ್ ಚೆಂಡು ನೇರವಾಗಿ ಹೋಗುತ್ತದೆ. ಅದೇ ಕ್ರಿಕೆಟ್ ಚೆಂಡನ್ನು ತನ್ನ ಸುತ್ತ ತಿರುಗುವಂತೆ (ಸ್ಪಿನ್) ಮಾಡಿ ಎಸೆದರೆ ಚೆಂಡು ತ್ರಿಜಾ್ಯ ಕಾರದ ಮಾರ್ಗದಲ್ಲಿ ಮುನ್ನಡೆಯುತ್ತದೆ. ಫುಟಾ್ಬಲ್ ಆಟಗಾರ ವೇಗವಾಗಿ ತಿರುಗುವಂತೆ ಒದ್ದ ಚೆಂಡು ಸರಳ ರೇಖೆಯಲ್ಲಿ ಚಲಿಸದೇ ತ್ರಿಜಾ್ಯಕಾರ ದಲ್ಲಿ ಚಲಿಸಿ ಗೋಲ್ ಪಡೆಯುವುದಕ್ಕೂ ಕಾರಣ ವಾಗುತ್ತದೆ. ವೃತಾ್ತಕಾರದ ವಸ್ತು ತನ್ನ ಸುತ್ತ ತಿರುಗುತಾ್ತ ಗಾಳಿಯಲ್ಲಿ ಚಲಿಸಿದರೆ ಒಂದು ಬದಿ ಯಲ್ಲಿ ಹೆಚ್ಚಿನ ಸಾಂದ್ರತೆಯನ್ನೂ, ಇನೊ್ನಂದೆಡೆ ಕಡಿಮೆ ಸಾಂದ್ರತೆಯನ್ನೂ ಪಡೆಯುವುದರಿಂದ ವಸ್ತುವಿನ ಪಥದಲ್ಲಿ ವ್ಯತಾ್ಯಸವುಂಟಾಗುತ್ತದೆ.
ಅದೇ ವಸ್ತುವನ್ನು ವೇಗವಾಗಿ ಬೀಸುತ್ತಿರುವ ಗಾಳಿಯ ಮಧ್ಯೆ ಇರಿಸಿದರೆ?
ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ಉಂಟಾಗುತ್ತದೆ. ಅಂದರೆ ವಸ್ತು ತಿರುಗಲು ಪಾ್ರರಂಭಿಸುತ್ತದೆ. (ಗಿರಿಗಿಟ್ಟಲೆ ನೆನಪಿಗೆ ಬಂತಲ್ಲವೇ) ಈಗ ಈ ಗಿರಿಗಿಟ್ಟಲೆಯನ್ನು ವೇಗವಾಗಿ ಗಾಳಿ ಬೀಸುತ್ತಿರುವಲ್ಲಿ ಇಟ್ಟರೆ ಗಿರಿಗಿರಿ ತಿರುಗುತ್ತದೆ. ಆ ತಿರುಗುವ ಗಿರಿಗಿಟ್ಟಲೆಯನ್ನು ವಿದ್ಯುತ್ ಉತಾ್ಪದಿಸುವ ರೋಟಾರಿಗೆ ಜೋಡಿಸಿದರೆ ಸತತ ವಿದ್ಯುತ್ ಲಭ್ಯವಾಗುತ್ತದೆ. ಮಾರ್ಸ್ ಉಪಕರಣ ಉಪಯೋಗಿಸುವ ಯಂತ್ರಜ್ಞಾನದ ಜೀವಾಳವೂ ಇದೇ.
ಆದರೆ ಸತತವಾಗಿ ವೇಗವಾಗಿ ಬೀಸುತ್ತಿರುವ ಗಾಳಿ ಇರುವುದು ಎಲ್ಲಿ? ಬೇರೆಲ್ಲೂ ಹೋಗುವುದು ಬೇಡ. ನಾವಿದ್ದಲ್ಲಿಯೇ ಮುನ್ನೂರು ಅಡಿ ಮೇಲೆ ಹೋದರೆ ಸಾಕು. ಸತತವಾದ, ಒಂದೇ ದಿಕ್ಕಿನಲ್ಲಿ ಬೀಸುತ್ತಿರುವ ಸಾಧಾರಣವಾಗಿ ಹತ್ತು ಮೀಟರ್/ ಸೆಕೆಂಡ್‌ಗೆ ಕಡಿಮೆಯಿಲ್ಲದ ವೇಗದ ಗಾಳಿ ಸದಾ ಲಭ್ಯ.
ಅಷ್ಟು ಎತ್ತರದಲ್ಲಿ ಸಾ್ಥಪಿಸುವುದು ಹೇಗೆ? ಇದಕ್ಕೆ ಉತ್ತರ ಹಗುರ ಅನಿಲ. ಅನಿಲಗಳಲ್ಲಿಯೆ ಅತಿ ಹಗುರವಾಗಿರುವುದು ಜಲಜನಕ. ಆದರೆ ಜಲಜನಕ ಸ್ವದಹ್ಯ. (ಅಂದರೆ ತನಗೆ ತಾನೇ ಹೊತ್ತಿಕೊಳ್ಳುವ) ಗುಣವುಳ್ಳ ಅನಿಲವಾದ್ದ ರಿಂದ ಅದರ ಬಳಕೆ ಅತಿ ಹಗುರವಾದ ಅನಿಲವಾದ ಹೀಲಿಯಂ ಅನಿಲ ಈ ಉಪಕರಣದ ಮುಖ್ಯ ಪರಿಕರ.
ಮಾರ್ಸ್ ಕಾರ್ಯ ನಿರ್ವಹಣೆ
ಅಗತ್ಯಕ್ಕೆ ತಕ್ಕ ಗಾತ್ರದ ಬೆಲೂನ್ ಹಾಗೂ ಅದಕ್ಕೆ ಅಳವಡಿಸಬಹುದಾದ ಬ್ಲೇಡುಗಳನ್ನು ಸಾಮಾನ್ಯ ವಾಹನದಲ್ಲಿ ಕೊಂಡೊಯ್ದು ಹೀಲಿಯಂ ತುಂಬಿಸಿ ಬಲಿಷ್ಟವಾದ ಉಕ್ಕಿನ ಕೇಬಲ್ ಮೂಲಕ ಆಗಸಕ್ಕೆ ಹಾರಿಬಿಟ್ಟರೆ ಸಾಕು. ಇಡಿಯ ಪಟ್ಟಣಕ್ಕೆ ವಿದ್ಯುತ್ ಬೇಕಾದರೆ ಒಂದಕ್ಕಿಂತ ಹೆಚ್ಚಿನ ಬೆಲೂನುಗಳ ಸಮೂಹದ ಅಗತ್ಯವಿದೆ. ಆಗಸದಲ್ಲಿ ಗಿರಗಿರ ತಿರುಗುವ ರೋಟರಿಗೆ ಅಳವಡಿಸಿರುವ ಡಿ.ಸಿ. ವಿದ್ಯುತ್ ಜನರೇಟರ್ ಮೂಲಕ ಭೂಮಿಗೆ ವಿದ್ಯುತ್ ವರ್ಗಾಯಿಸಿ ಸೂಕ್ತ ಆಲ್ಟರ್ನೇಟರ್ ಮೂಲಕ ಎ.ಸಿ.ಗೆ ಪರಿವರ್ತಿಸಿಕೊಳ್ಳಬಹುದು.
ಅತಿ ಸರಳವಾದ ಈ ಮಾರ್ಸ್ ಉಪಕರಣದ ಉಪಯೋಗಗಳು ಹಲವಾರು. ಇದನ್ನು ಯಾವುದೇ ಊರಿನಲ್ಲಿ, ಯಾವುದೇ ಸ್ಥಳದಲ್ಲಿ ಸುಲಭವಾಗಿ ಸಾ್ಥಪಿಸಬಹುದು. ಅಗತ್ಯವಾದ ಗಾಳಿಯ ವೇಗ ಪ್ರತಿ ಸೆಕೆಂಡಿಗೆ ಕನಿಷ್ಟ ನಾಲ್ಕು ಮೀಟರ್ ಇದ್ದರೂ ಸಾಕು. ಆದರೆ ಸುಮಾರು ಮುನ್ನೂರು ಅಡಿ ಎತ್ತರದಲ್ಲಿ ಕನಿಷ್ಟ ಹತ್ತು ಮೀಟರ್ ಆದರೂ ಗಾಳಿ ಯಾವಾಗಲೂ ಇದೇ್ದ ಇರುತ್ತದೆ. ಹಾಗಾಗಿ ಉಪಕರಣ ನಿಲ್ಲುವ ಭಯ ಇಲ್ಲವೇ ಇಲ್ಲ. ಎಷ್ಟೇ ವೇಗವಾದ ಗಾಳಿ ಇದ್ದರೂ ತಡೆದುಕೊಳ್ಳುವ ಸಾಮರ್ಥ್ಯ ಮಾರ್ಸ್‌ಗೆ ಇದೆ.
ಸುಮಾರು 600ರಿಂದ 1000 ಅಡಿ ಎತ್ತರದಲ್ಲಿ ಉಪಕರಣವನ್ನು ಸಾ್ಥಪಿಸಿದರೆ ಆ ಊರಿನ ವಿದ್ಯುತ್ ಕೊರತೆ ಶಾಶ್ವತವಾಗಿ ನೀಗಲು ಸಾಧ್ಯ. ಚಿಕ್ಕ ಮನೆಗೆ ಬೇಕಾದ ಒಂದು ಯಂತ್ರದಿಂದ ಹಿಡಿದು ಇಡಿಯ ನಗರಕ್ಕೆ ಬೇಕಾದ ಹಲವು ಯಂತ್ರಗಳ ಸಮುಚ್ಛಯದವರೆಗೂ ಸಾ್ಥಪಿಸಲು ಸಾಧ್ಯ. ಗಾಳಿಯಂತ್ರದ ಒಂದು ಭಾಗದಷ್ಟು ಮಾತ್ರ ಉತಾ್ಪದನಾ ವೆಚ್ಚವಿರುವ ಮಾರ್ಸ್ ಉಪಕರಣವನ್ನು ಮೇಲಕ್ಕೇರಿಸುವುದೂ ನಿರ್ವಹಣೆಗಾಗಿ ಕೆಳಕ್ಕಿಳಿಸುವುದೂ ಅತಿ ಸುಲಭ. ಹಗುರವಾದ್ದರಿಂದ ಯಾವ ಸ್ಥಳದಲ್ಲಿ ಅಗತ್ಯವಿದೆಯೋ ಅಲ್ಲಿ ಸುಲಭವಾಗಿ ವಾಹನದಲ್ಲಿ ಕೊಂಡೊಯ್ಯಲೂ ಸಾಧ್ಯ. ಯಾವುದೇ ರೀತಿಯ ಮಾಲಿನ್ಯವಿರದ ಕಾರಣ ಅತ್ಯಂತ ಪರಿಸರ ಸ್ನೇಹಿ ಕೂಡಾ.
ಆದರೆ ಸುರಕ್ಷತೆಯ ಕಾರಣಕ್ಕೆ ಲೈಟ್ನಿಂಗ್ ಅರೆಸ್ಟರ್ ಅಳವಡಿಸುವುದು ಅಗತ್ಯ. ಮಳೆಗಾಲದಲ್ಲಿ ಸಹಾ ಮೇಲಾ್ಭಗದಲ್ಲಿ ಗಾಳಿಯೊಂದಿಗೆ ಮಳೆ ಹನಿ ಹಾಗೂ ತೇವಾಂಶ ಇರುವ ಕಾರಣ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆ ಇದೆ. ಅದಕ್ಕೆಂದೇ ತುಕ್ಕು ನಿರೋಧಕ ಹಾಗೂ ಹಗುರವಾದ ಅಲ್ಯೂಮಿನಿಯಂ ಲೋಹದಿಂದ ಮಾರ್ಸ್ ಉಪಕರಣವನ್ನು ತಯಾರಿಸಲಾಗಿದೆ. ಒಮ್ಮೆ ಸಾ್ಥಪಿಸಿದ ಬಳಿಕ ಹೆಚ್ಚೂ ಕಡಿಮೆ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾದುದರಿಂದ ವಿದ್ಯುತ್ ಬೆಲೆ ಈಗ ಲಭ್ಯವಾಗುತ್ತಿರುವ ವಿದ್ಯುತ್ ಬೆಲೆಗಿಂತ ತೀರಾ ಅಗ್ಗವಾಗಲಿದೆ.
ಒಮ್ಮೆ ಅಳವಡಿಸಿದರೆ ಸುಮಾರು ಹದಿನೈದು ವರ್ಷಗಳವರೆಗೆ ಬಾಳಿಕೆ ಬರುವ ಈ ಉಪಕರಣದ ಬೆಲೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಈ ವರ್ಷದ ಅಂತ್ಯದಲ್ಲಿ ಮಾರ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಪ್ರಸ್ತುತ ಗಣಿ, ಸಮುದ್ರ, ಧ್ರುವ ಪ್ರದೇಶ ಮೊದಲಾದ ನಿರ್ಜನ ಪ್ರದೇಶಗಳಲ್ಲೂ ಜನವಸತಿ ವಿರಳವಾದೆಡೆಗಳಲ್ಲೂ ವಿದ್ಯುತ್ ಉತಾ್ಪದನೆ ಸುಲಭ ಸಾಧ್ಯವಲ್ಲ. ಇಲ್ಲಿ ಭಾರವಾದ ಡೀಸೆಲ್ ಜನರೇಟರುಗಳನ್ನು ಉಪಯೋಗಿಸಲಾಗುತ್ತಿದೆ. ಉರಿಸುವ ಡೀಸೆಲ್ ಹೊಗೆ ಪರಿಸರಕ್ಕೂ ಹಾನಿಕರ, ಇಂಜಿನ್ ನಿರ್ವಹಣೆಯೂ ಕಷ್ಟಕರ. ಇಂತಹ ಸ್ಥಳಗಳಲ್ಲೆಲಾ್ಲ ‘ಮಾರ್ಸ್’ ಒಂದು ವರದಾನವಾಗಿ ಪರಿಣಮಿಸಲಿದೆ.ಈ ಸರಳ ವಿದ್ಯುತ್ ಗಾಳಿಯಂತ್ರ ನಮ್ಮ ಊರುಗಳಿಗೂ ಶೀಘ್ರವೇ ಆಗಮಿಸುವಂತಾಗಲಿ ಎಂದು ಅಶಿಸೋಣ.
ಹತ್ತು ಕಿಲೋವಾ್ಯಟ್ ವಿದ್ಯುತ್ ಉತಾ್ಪದನಾ ಸಾಮರ್ಥ್ಯದ ಈ ಉಪಕರಣದ ಅಂಕಿ ಅಂಶಗಳು ಹೀಗಿವೆ: ಮಾಗೆನ್ ಪವರ್ ಪೊ್ರಡಕ್‌ಟ: ಮಾಡೆಲ್ 10 ಕೆಡಬ್ಲು ನಿಗದಿತ ವಿದ್ಯುತ್: 10 ಸಾವಿರ ವಾ್ಯಟ್‌ಸ ಸೈಜ್: 30 ಅಡಿ- 60 ಅಡಿ ಶಿಪಿಂಗ್ ತೂಕ: 3000 ಎಲ್‌ಬಿಎಸ್‌ಗಿಂತ ಕಡಿಮೆ ಹೀಲಿಯಂ ಪ್ರಮಾಣ: ಅಂದಾಜು 33000 ಕ್ಯೂಬಿಕ್ ಅಡಿ ಜನರೇಟರ್: 25 ಕೆಡಬ್ಲು ವಾರಂಟಿ: ಐದು ವರ್ಷಗಳವರೆಗೆ ಜೀವಿತಾವಧಿ: 10-15 ವರ್ಷಗಳು.

No comments:
Post a Comment