ಧರೆಯಲ್ಲಿ ಈ ಹಿಂದೆ ಭಾರೀ ವಿನಾಶದ ಮಹಾಪ್ರಳಯಗಳು ಎಂದಾದರೂ ಸಂಭವಿಸಿವೆಯೇ? ಭೂಮಿಯನ್ನು ತಳಮಳಗೊಳಿಸಬಲ್ಲ ಜೀವಜಾಲವನ್ನು ಧ್ವಂಸಮಾಡಬಲ್ಲ ುತೊ್ತಂದು ಮಹಾಲಯ ಎರಗಲಿದೆಯೇ? ಹೌದಾದರೆ ಅದರ ಕಾಲ ಸ್ವರೂಪ ಸಾಮರ್ಥ್ಯ ಪರಿಣಾಮ ಏನು?
ಈ ಪ್ರಶ್ನೆಯ ಬಗೆಗೆ ಆಲೋಚಿಸುವ ಮೊದಲು ಇನೊ್ನಂದು ಪ್ರಶ್ನೆ: ‘ಪ್ರಳಯ ಎಂದರೇನು?’ ಸ್ಪಷ್ಟವಾಗಿಯೇ ಪ್ರಳಯ ಎಂದರೆ ವಿನಾಶ. ಪ್ರಪಂಚದಲ್ಲಿ ಎಲ್ಲೆಡೆ ಏಕಕಾಲದಲ್ಲಿ ಸಂಭವಿಸುವ ಸರ್ವನಾಶದ ಕ್ರಿಯೆಯೇ ಪ್ರಳಯ, ಮಹಾಲಯ ಹೌದಲ್ಲ? ಇಡೀ ಧರೆಯಲ್ಲಿ ಧರೆಯ ಇಡೀ ಜೀವಜಾಲದಲ್ಲಿ ಭಾರೀ ವಿನಾಶ ತರುವ ವಿದ್ಯಮಾನವೇ ಪ್ರಳಯ. ಹಾಗೆಂದರೆ ಪ್ರಳಯ ಎಂಬುದು ಬರೀ ಮನುಷ್ಯರ ವಿನಾಶಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ.
ವಿಸ್ಮಯ ಏನೆಂದರೆ ನಮ್ಮ ಪೃಥ್ವಿಯಲ್ಲಿ ಸಾಮೂಹಿಕ ವಿನಾಶದ ಪ್ರಳಯಗಳು ಈ ಹಿಂದಿನಿಂದಲೂ ತಾಂಡವ ನಡೆಸಿವೆ. ಐನೂರು ಕೋಟಿ ವರ್ಷ ವಯಸ್ಸಿನ ನಮ್ಮ ಧರೆಯ ಸುಮಾರು ಮುನ್ನೂರಿಪ್ಪತ್ತು ಕೋಟಿ ವರ್ಷಗಳ ಜೀವೇತಿಹಾಸದಲ್ಲಿ ಈ ಹಿಂದೆ ಐದು ಮಹಾಪ್ರಳಯಗಳು ಜರುಗಿವೆ. ಪ್ರತಿ ಬಾರಿಯೂ ಸಂಭವಿಸಿದ ಸಾಮೂಹಿಕ ಜೀವಿನಾಶದ ವಿವರಗಳು ಪಳೆಯುಳಿಕೆಗಳಲ್ಲಿ ನಿಚ್ಚಳವಾಗಿ ದಾಖಲಾಗಿವೆ. ಆ ಐದೂ ಪ್ರಳಯಗಳ ಕಾಲ ಮತ್ತು ಪರಿಣಾಮಗಳ ಸಂಕ್ಷಿಪ್ತ ವಿವರಗಳು ಇಲ್ಲಿವೆ-ನೀವೇ ಗಮನಿಸಿ:
* ಮೊದಲ ಪ್ರಳಯ ನಡೆದದ್ದು ‘ಆರ್ಡೊವೀಸಿಯನ್’ ಭೂ ಯುಗದಲ್ಲಿ ಎಂದರೆ ಈಗ್ಗೆ ನಲವತಾ್ನಲ್ಕು ಕೋಟಿ ವರ್ಷ ಹಿಂದೆ. ಆ ಕಾಲದಲ್ಲಿ ಧರೆಯಲ್ಲಿದ್ದ ಸಕಲ ಜೀವಿ ಕುಟುಂಬಗಳ ಶೇಕಡ ಇಪ್ಪತ್ತೈದು ಭಾಗ ಆ ಪ್ರಳಯದಲ್ಲಿ ನಿರ್ನಾಮಗೊಂಡುವು.
* ಎರಡನೆಯ ಮಹಾಲಯ ಸಂಭವಿಸಿದ್ದು ‘ಡಿವೋನಿಯನ್ ಯುಗ’ದಲ್ಲಿ. ಮುವ್ವತ್ತೇಳು ಕೋಟಿ ವರ್ಷ ಹಿಂದಿನ ಆ ಮಹಾಲಯದಲ್ಲಿ ಆಗಿನ ಸಸ್ಯಗಳ ಮತ್ತು ಪಾ್ರಣಿಗಳ ಕುಟುಂಬಗಳ ಶೇಕಡ ಹತೊ್ತಂಬತ್ತು ಭಾಗ ಅಳಿದುಹೋಯಿತು.
* ಈಗ್ಗೆ ಇಪ್ಪತ್ತೈದು ಕೋಟಿ ವರ್ಷ ಹಿಂದೆ ‘ಪರ್ಮಿಯನ್ ಯುಗ’ದಲ್ಲಿ ಎರಗಿದ ಮಹಾಪ್ರಳಯ ಅತ್ಯಂತ ಭೀಕರವಾಗಿತ್ತು. ಆಗ ಭೂಮಿಯಲ್ಲಿ ನೆಲಸಿದ್ದ ಜೀವಿ ಕುಟುಂಬಗಳ ಶೇಕಡ ಐವತಾ್ನಲ್ಕು ಭಾಗ ಆ ಪ್ರಳಯಕ್ಕೆ ಆಹುತಿಯಾಯಿತು.
* ಈಗ್ಗೆ ಇಪ್ಪತೊ್ತಂದು ಕೋಟಿ ವರ್ಷ ಪೂರ್ವದ ‘ಟ್ರಯಾಸಿಕ್ ಯುಗ’ದಲ್ಲಿ ಸಂಭವಿಸಿದ ಪ್ರಳಯ ನಾಲ್ಕನೆಯದು. ಆಗಿನ ಸರೀಸೃಪಗಳ ಮತ್ತು ಅಕಶೇರುಕಗಳ ಬಹುಭಾಗವನ್ನು ಅಳಿಸಿಹಾಕಿದ ಆ ಪ್ರಳಯಕ್ಕೆ ಆಗಿನ ಶೇಕಡ ಇಪ್ಪತ್ಮೂರರಷ್ಟು ಜೀವಿ ಕುಟುಂಬಗಳು ಬಲಿಯಾದುವು.
* ಭೂಮಿಯ ಜೀವೇತಿಹಾಸದ ಐದನೆಯ ಪ್ರಳಯ ಈಗ್ಗೆ ಆರೂವರೆ ಕೋಟಿ ವರ್ಷಗಳ ಹಿಂದೆ ‘ಕ್ರಿಟೇಶಿಯಸ್ ಯುಗ’ದಲ್ಲಿ ನಡೆಯಿತು. ಆಗ ಧರೆಯಲ್ಲಿ ಕಿಕ್ಕಿರಿದಿದ್ದ ‘ಡೈನೋಸಾರ್’ಗಳನ್ನು ಸಂಪೂರ್ಣ ತೊಡೆದುಹಾಕಿದ ಆ ಪ್ರಳಯದಲ್ಲಿ ಆಗಿನ ಶೇಕಡ ಹದಿನೇಳರಷ್ಟು ಜೀವಿ ಕುಟುಂಬಗಳು ಅಳಿದುಹೋದುವು.
ಸ್ಪಷ್ಟವಾಗಿಯೇ ಪ್ರಸ್ತುತದ ಯಾವುದೇ ಪ್ರಳಯದ ಚರ್ಚೆ ಆರನೆಯ ಮಹಾಲಯ ಕುರಿತದೇ್ದ ಆಗಬೇಕಷ್ಟೆ. ಅಷ್ಟೇ ಅಲ್ಲ, ಮನುಷ್ಯ ಎದುರಿಸಲಿರುವ ಪ್ರಥಮ ಪ್ರಳಯ ಕೂಡ ಇದೇ ಆಗಲಿದೆ.
ವಿಪರ್ಯಾಸ ಏನೆಂದರೆ ಪ್ರಳಯವನ್ನು ಎದುರು ನೋಡುತ್ತಿರುವ, ಪ್ರಳಯದ ಭೀತಿಯಲ್ಲಿರುವ ಮಾನವ ಸಂಕುಲವೇ ಆರನೆಯ ಪ್ರಳಯದ ಏಕೈಕ ಕಾರಣ. ಹಿಂದಿನ ಐದೂ ಮಹಾಪ್ರಳಯಗಳಂತೆ ಈ ಆರನೆಯ ಪ್ರಳಯ ನೈಸರ್ಗಿಕ ಅವಘಡ ಆಗುವುದಿಲ್ಲ. ಜೊತೆಗೆ ಈ ಪ್ರಳಯ ಅವೆಲ್ಲಕ್ಕಿಂತ ತೀವ್ರತರವಾಗಿದ್ದು, ದೀರ್ಘ ಅವಧಿಯದೂ ಆಗಿದ್ದು ಸರ್ವನಾಶಕ ಆಗಲಿದೆ ಸಹ.
ಇದೆಲ್ಲ ಯಾವುದೇ ಭವಿಷ್ಯವಾಣಿಯಲ್ಲ; ಕಾಲಜ್ಞಾನದ ಹೇಳಿಕೆಗಳಲ್ಲ; ಊಹಾಪೋಹ ಅಲ್ಲವೇ ಅಲ್ಲ. ಏಕೆಂದರೆ ಆರನೆಯ ಪ್ರಳಯ ಕೆಲ ದಶಕಗಳ ಹಿಂದೆಯೇ ಆರಂಭವಾ ಗಿದಾ್ದಗಿದೆ. ಇನ್ನು ಒಂದೆರಡು ಶತಮಾನಗಳಲೇ್ಲ ಪೂರ್ಣ ಗೊಳ್ಳಲಿದೆ. ಬಾಹ್ಯವಾಗಿ ಎದ್ದು ಕಾಣದೆ ಅಗೋಚರವಾಗಿ ನಿಶ್ಯಬ್ಧವಾಗಿ ತನ್ನ ವಿನಾಶಕರ ಕಬಂಧ ಬಾಹುಗಳನ್ನು ಎಲ್ಲ ಜೀವಾವಾರಗಳಿಗೂ, ಇಡೀ ಜೀವಜಾಲದೊಳಕ್ಕೂ ಚಾಚುತ್ತ ಈಗಾಗಲೇ ಅರ್ಥ ದೂರ ದಾಟಿದೆ!
ಇದಕ್ಕೆಲ್ಲ ವೈಜ್ಞಾನಿಕ ಆಧಾರಗಳಿವೆ; ಅಧ್ಯಯನದ ಅಸಂಖ್ಯ ದಾಖಲೆಗಳಿವೆ; ಗಮನಿಸಿದರೆ ಗೋಚರಿಸುವ ಅನಂತ ಅಂಶಗಳಿವೆ. ವಿಶ್ವವಿಖಾ್ಯತ ಪರಿಸರ ಸಂರಕ್ಷಣಾ ಸಂಸ್ಥೆ ‘ಇಂಟರ್ನಾ್ಯಶನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (ಐ.ಯು.ಸಿ.ಎನ್.) ‘ಪ್ರಕಟಿಸಿರುವ ಅದರ ಅತ್ಯಂತ ಇತ್ತೀಚಿನ ‘ರೆಡ್ ಲಿಸ್‌ಟ-2009’ ಕೂಡ ಇದೇ ದುಸ್ಥಿತಿಯನ್ನು ಎತ್ತಿ ಹಿಡಿದಿದೆ.
ಪೃಥ್ವಿಯಲ್ಲಿ ಮಿತಿಮೀರುತ್ತಿರುವ ಮನುಷ್ಯರ ಸಂಖ್ಯೆಯಿಂದಾಗಿ ಹಾಗೂ ನಿಸರ್ಗ ಸಂಪನ್ಮೂಲಗಳ ಅನಿಯಂತ್ರಿತ ದುಂದು ಬಳಕೆಯಿಂದಾಗಿ, ಸಕಲ ಜೀವಾವಾರಗಳ ಮೇಲಿನ ಮಾನವ ದುರಾಕ್ರಮಣದಿಂದಾಗಿ ಆರಂಭಗೊಂಡು ಸಾಕಷ್ಟು ದೂರ ಕ್ರಮಿಸಿರುವ ಈ ಪ್ರಳಯವನ್ನು ವಿಶ್ವಮಾನ್ಯ ನಿಸರ್ಗ ವಿಜ್ಞಾನಿ ಎಡ್ವರ್ಡ್-ಒ-ವಿಲ್ಸನ್ ‘ಧರೆಯ ನಿಶ್ಶಬ್ದದ ರಕ್ತಸಾ್ರವ’ ಎಂದೇ ಕರೆದಿದಾ್ದರೆ. ಧರೆಯಲ್ಲಿರುವ ಒಟ್ಟು ಹತ್ತುಕೋಟಿ ಜೀವಿ ಪ್ರಭೇದಗಳನ್ನೂ ನುಂಗಬಲ್ಲ ಸಾಮರ್ಥ್ಯದ ಈ ಮಹಾಪ್ರಳಯ ಅದನ್ನು ಹುಟ್ಟುಹಾಕಿ ಮುನ್ನಡೆಸುತ್ತಿರುವ ‘ಬುದ್ಧಿವಂತ ಮನುಷ್ಯ’ನನ್ನೂ ನಿರ್ನಾಮ ಮಾಡದೆ ಬಿಡುವುದೇ?
ಎಂಥ ವಿಲಕ್ಷಣ ಪ್ರಳಯ! ಅಲ್ಲವೇ?
ಎನ್.ವಾಸುದೇವ್

No comments:
Post a Comment